KPSC PDO recruitment 2024 : ನಮಸ್ಕರ ಗೆಳೆಯರೇ , ಈ ಒಂದು ವರದಿಯ ಮೂಲಕ ರಾಜ್ಯದಲ್ಲಿ PDO ಹುದ್ದೆಗಳಿಗೆ ತೈಯಾರಿ ನಡೆಸುತ್ತಿರುವವರಿಗೆ ಗುಡ್ ನ್ಯೂಸ್ ನೀಡಲಾಗುತ್ತಿದೆ ಎಂದು ಹೇಳಬಹುದು. ಏಕೆಂದರೆ ಕರ್ನಾಟಕ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಒಟ್ಟು 247 ಹುದ್ದೆಗಳಿಗೆ(RPC&HK) ಅರ್ಜಿಯನ್ನು ಕರೆಯಲಾಗಿದೆ.ಆದ್ದರಿಂದ ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು 15/04/ 2024 ರಿಂದ 15/05/2024 ರ ತನಕ ಈ ಹುದ್ದೆಗಳಿಗೆ ಅರ್ಜಿಯನ್ನು ಹಾಕಲು ಸರ್ಕಾರ ಅವಕಾಶ ಮಾಡಿ ಕೊಟ್ಟಿದೆ.
ಹೌದು ಗೆಳೆಯರೇ, ಮೇಲೆ ಹೇಳಿದಂತೆ ಕರ್ನಾಟಕ ಲೋಕ ಸೇವಾ ಆಯೋಗದ ಮುಖಾಂತರ ಒಟ್ಟು 247 ಪಿಡಿಒ(PDO) ಹುದ್ದೆಗಳಿಗೆ ಅರ್ಜಿಯನ್ನು ಆಸಕ್ತಿ ಇರುವ ಮತ್ತು ಅರ್ಹತೆಯನ್ನು ಹೊಂದಿದ ವಿಧ್ಯಾರ್ಥಿಗಳು ಕರೆಯಲಾಗಿದೆ. ನೀವು ಕೂಡಾ ಈ ಹುದ್ದೆಗೆ ಅರ್ಜಿ ಹಾಕಬೇಕೆ? ಹಾಗದರೆ ಅರ್ಜಿ ಹಾಕಲು ಬೇಕಾಗುವ ಶೈಕ್ಷಣಿಕ ಅರ್ಹತೆಗಳು ಏನು?ಅರ್ಜಿ ಹಾಕಲು ಯಾವ ದಾಖಲೆಗಳು ಬೇಕು?ಅರ್ಜಿ ಹಾಕಲು ಕೊನೆಯ ದಿನಾಂಕ ಯಾವಾಗ? ಈ PDO ಹುದ್ದೆಗೆ ಅರ್ಜಿ ಹಾಕಲು ಅರ್ಜಿ ಶುಲ್ಕ ಎಸ್ಟು?ಎಲ್ಲಿ ಅರ್ಜಿಯನ್ನು ಹಾಕಬಹುದು? PDO ಹುದ್ದೆಗೆ ನೀಡುವ ಪ್ರತಿ ತಿಂಗಳ ವೇತನ ಎಸ್ಟು? ಇನ್ನಿತರೇ ಈ ಪಿಡಿಒ ಹುದ್ದೆಗೆ ಸಂಬಂಧಿಸಿದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ನಮ್ಮ ಈ ಮಾಧ್ಯಮದಲ್ಲಿ ಪ್ರತಿ ದಿನ ನೀಡುವ ಮಾಹಿತಿ ಯಾವುದೇ ಸುಳ್ಳನ್ನು ಹೊಂದಿರುವುದಿಲ್ಲ. ಸರ್ಕಾರದ ಅಧಿಕೃತ ವೆಬ್ ಸೈಟ್ ನಲ್ಲಿರುವ ಉದ್ಯೋಗ , ಪ್ರಚಲಿತ ಸುದ್ದಿ, ರೈತರಿಗೆ ಸಂಬಂಧಪಟ್ಟ ಮಾಹಿತಿ ಮತ್ತು ಸರ್ಕಾರದ ಎಲ್ಲಾ ಯೋಜನೆಯ ಬಗ್ಗೆ ಮಾಹಿತಿಯನ್ನು ತಕ್ಷಣ ನೀಡುತ್ತೇವೆ. ಅದ್ದರಿಂದ ನಮ್ಮ ವೆಬ್ ಸೈಟ್ ಅನ್ನು ನೋಟಿಫಿಕೇಶನ್ ಆನ್ ಇಟ್ಟುಕೊಳ್ಳಿ ಮತ್ತು ಪ್ರತಿ ದಿನ ವೆಬ್ ಸೈಟ್ ಗೆ ಭೇಟಿ ನೀಡಿ.
(KPSC PDO recruitment 2024) ನ ಹುದ್ದೆಯ ವಿವರ :
ಕರ್ನಾಟಕದ RDPR ಕಡೆಯಿಂದ ಒಟ್ಟು 247 PDO ಹುದ್ದೆಗಳ ಭರ್ತಿಗೆ KPSC ಕಡೆಯಿಂದ ರಾಜ್ಯದ ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ. ಅದ್ದರಿಂದ ಈ ಹುದ್ದೆಯ ಭರ್ತಿಗಾಗಿ ವರ್ಷಗಳಿಂದ ತೈಯ್ಯಾರಿ ಮಾಡುತ್ತಿರುವವರು ಕೆಳಗೆ ನೀಡಿದ ಕೊನೆಯ ದಿನಾಂಕದ ಒಳಗೆ ಈ ಪಿಡಿಒ ಹುದ್ದೆಗೆ (KPSC PDO recruitment 2024)ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ನೇರವಾದ ಅಧಿಕೃತ ವೆಬ್ ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ
•ಕರ್ನಾಟಕದ ಪಂಚಾಯತ್ ರಾಜ್ ಇಲಾಖೆ ಮತ್ತು ಗ್ರಾಮ ಅಭಿವೃದ್ದಿ ಇಲಾಖೆಯಿಂದ ಹಲವು ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಸಕ್ತಿ ಮತ್ತು ಅರ್ಹತೆ ಇರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
•KPSC ಅಡಿಯಲ್ಲಿ ಈ PDO 247 ಖಾಲಿ ಇರುವ ಹುದ್ದೆಗಳಿಗೆ ಭರ್ತಿಗೆ ಅರ್ಜಿ ಕರೆಯಲಾಗಿದೆ.
• ಇದು ಪಂಚಾಯತಿ ಅಭಿವೃದ್ಧಿ ಅಧಕಾರಿಗಯ ಹುದ್ದೆಯಗಿದ್ದು, ರಾಜ್ಯದ ವಿವಿಧ ಸ್ಥಳಗಳಲ್ಲಿ ಈ ಹುದ್ದೆಗೆ ಆಯ್ಕೆ ಆದವರು ಕೆಲಸ ಮಾಡಬೇಕಾಗುತ್ತದೆ.
ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ನೋಂದಣಿ 15/04/2024 ರಿಂದ 15/05/2024 ರ ತನಕ ಮಾಡಿಕೊಳ್ಳಬಹುದು ಆಗಿದೆ. ಈ ಹುದ್ದೆಗೆ ಅರ್ಜಿ ಹಾಕಲು ಕೆಪಿಎಸ್ಸಿ ಯ ಅಧಿಕೃತ ವೆಬ್ ಸೈಟ್ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು . ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು? ಈ ಹುದ್ದೆಗೆ ಯಾರೆಲ್ಲ ಅರ್ಜಿ ಸಲ್ಲಿಸಬೇಕು? ಅರ್ಜಿ ಹಾಕಲು ಶೈಕ್ಷಣಿಕ ಅರ್ಹತೆ ಏನು? ಈ ಹುದ್ದೆಗಳಿಗೆ ಪ್ರತಿ ತಿಂಗಳ ಸಂಬಳ ಎಸ್ಟು? ಈ ಹುದ್ದೆಗೆ ಇರುವ ವಯಸ್ಸಿನ ಸಡಿಲಿಕೆ ಎಸ್ಟು? ಈ ಹುದ್ದೆಗೆ ಆಯ್ಕೆ ವಿಧಾನ ? ಈ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ ಯಾವಾಗ ? ಎಂಬ ಇನ್ನಿತರ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.
ಮಹಿಳೆಯರು ಉಚಿತವಾಗಿ ಬಟ್ಟೆ ಓಲೆಯುವ ಯಂತ್ರ ಪಡೆಯಬಹುದು.ಅದಕ್ಕಾಗಿ ಇಲ್ಲಿ ಅರ್ಜಿ ಹಾಕಿ.
(KPSC PDO recruitment 2024) ಖಾಲಿ ಇರುವ ಹುದ್ದೆಗಳು ಎಸ್ಟು?ಯಾವುವು?
ಕರ್ನಾಟಕ ಲೋಕ ಸೇವಾ ಆಯೋಗವು ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯಲ್ಲಿ ಖಾಲಿ ಇರುವ 237 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.ಅದರಲ್ಲಿ ಒಟ್ಟು 97 ಹುದ್ದೆಗಳು ಹೈದರಾಬಾದ್ ಕರ್ನಾಟಕ ವಿಭಾಗಕ್ಕೆ ಸೀಮಿತವಾಗಿವೆ ಮತ್ತು ಉಳಿದ 150 ಹುದ್ದೆಗಳು ಎಲ್ಲರೂ ಅರ್ಜಿ ಹಾಕಬಹುದು.
- ಹೈದರಾಬಾದ್ ಕರ್ನಾಟಕ ವಲಯ(HK) – 97 ಹುದ್ದೆಗಳು
- ಇನ್ನು ಉಳಿದ ವಿಭಾಗ – 150 ಹುದ್ದೆಗಳು
- ಒಟ್ಟು ಹುದ್ದೆಗಳು – 247
ಪಿಡಿಒ ಹುದ್ದೆಗೆ ಬೇಕಾದ ಅರ್ಹತೆಗಳೇನು?
ಈ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವರಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆಗಳು ಮತ್ತು ವೋಯೋಮಿತಿಯನ್ನು KPSC ಅಧಿಸೂಚನೆಯ ಪ್ರಕಾರ ಕೆಳಗೆ ನೀಡಲಾಗಿದೆ.
•ಶೈಕ್ಷಣಿಕ ಅರ್ಹತೆ ಏನಿರಬೇಕು?
ಈ ಪಿಡಿಒ(KPSC PDO recruitment 2024) ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದಾದರೂ ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯದ ಅಥವಾ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು ಇಂತವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ವಯೋಮಿತಿ :
ಈ PDO ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕರ್ನಾಟಕ ಲೋಕ ಸೇವಾ ಆಯೋಗದ (KPSC) ಮೂಲಕ ಇರಬೇಕಾದ ಕನಿಷ್ಟ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 40 ವರ್ಷ.ಯಾವ ಮೀಸಲಾತಿ ಅವರಿಗೆ ಎಸ್ಟು ವರ್ಷ ವಯಸ್ಸಿನ ಸಡಿಲಿಕೆ ಎಂದು ಕೆಳಗೆ ನೀಡಲಾಗಿದೆ.
- ಸಾಮಾನ್ಯ ಅರ್ಹತೆ – 35 ವರ್ಷ
- ಪ್ರವರ್ಗಾ 2(ಎ),2(ಬಿ),3(ಎ),3(ಬಿ) – 38 ವರ್ಷ
- ಪರಿಶಿಷ್ಠ ಜಾತಿ/ಪಂಗಡ, ಪ್ರವರ್ಗಾ -1 – 40 ವರ್ಷ
ಈ ಅರ್ಜಿಯನ್ನು ಹಾಕಲು ಮೊದಲು ಅಧಿಸೂಚನೆಯಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿ ನಂತರ ಅರ್ಜಿಯನ್ನು ಹಾಕಿ.
PDO ಹುದ್ದೆಗೆ ಅರ್ಜಿ ಶುಲ್ಕ ಎಸ್ಟು ?
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿಯ ಶುಲ್ಕವನ್ನು ವರ್ಗಗಳ ಆಧಾರದ ಮೇಲೆ KPSC ಅಧಿಸೂಚನೆಯಲ್ಲಿ ನೀಡಲಾಗಿದೆ.
- ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ – 600 ರೂಪಾಯಿ
- ಪ್ರವರ್ಗಾ 2(ಎ),2(ಬಿ),3(ಎ),3(ಬಿ) – 300 ರೂಪಾಯಿ
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ – 50 ರೂಪಾಯಿ
- ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ/ಪ್ರವರ್ಗಾ -1/ಅಂಗವಿಕಲ ಅಭ್ಯರ್ಥಿಗಳಿಗೆ – ಯಾವುದೇ ಶುಲ್ಕ ಇಲ್ಲ
ಅರ್ಜಿ ಸಲ್ಲಿಸಿದವರು ಅರ್ಜಿಯ ಶುಲ್ಕವನ್ನು ಆನ್ಲೈನ್ ಮೂಲಕವೇ ಸಲ್ಲಿಸಬಹುದು. ಆನ್ಲೈನ್ ಮೂಲಕ ಸಲ್ಲಿಸುವ ಆಪ್ಷನ್ ಇತರ ಇವೆ.
•UPI ಮೂಲಕ ಶುಲ್ಕ ಪಾವತಿ ಮಾಡಬಹುದು.
•ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿ ಮಾಡಬಹುದು.
•ಡೆಬಿಟ್ ಕಾರ್ಡ್ & ಕ್ರೆಡಿಟ್ ಕಾರ್ಡ್ ಮೂಲಕವು ಅರ್ಜಿ ಶುಲ್ಕ ಪಾವತಿ ಮಾಡಬಹುದು.
ಗಮನಿಸಿ : ನೀವು ಒಮ್ಮೆ ಅರ್ಜಿ ಶುಲ್ಕವನ್ನು ಪ ಅತಿ ಮಾಡಿದ ನಂತರ ಅದನ್ನು ಹಿಂದಕ್ಕೆ ನೀಡುವುದಿಲ್ಲ ಮತ್ತು ಅದನ್ನು ಬೇರೆ ಅರ್ಜಿಗಳಿಗೆ ಹೊಂದಿಕೊಳ್ಳುವುದಿಲ್ಲ.ಆದ್ದರಿಂದ ಅರ್ಜಿಯ ಎಲ್ಲಾ ಮಾಹಿತಿ ಸರಿಯಿದ್ದರೆ ಶುಲ್ಕವನ್ನು ಪಾವತಿ ಮಾಡಿ.
(KPSC PDO recruitment 2024) ವೇತನ ಎಸ್ಟು?
ಕರ್ನಾಟಕ ಲೋಕ ಸೇವಾ ಆಯೋಗದ ಅಧಿಸೂಚನೆಯಲ್ಲಿ ನೀಡಿರುವ ಹಾಗೆ ಈ PDO ಹುದ್ದೆಗಳಿಗೆ ಪ್ರತಿ ತಿಂಗಳ ವೇತನ 37,900 ರಿಂದ 70,850 ಆಗಿರುತ್ತದೆ.
•ವೇತನ – 37,900 ರಿಂದ 70,850
(KPSC PDO recruitment 2024) ಆಯ್ಕೆ ಪ್ರಕ್ರಿಯೆ :
ಈ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಕನ್ನಡ ಭಾಷಾ ಪರೀಕ್ಷೆ ಅಭ್ಯರ್ಥಿಯ ಸ್ಥಳೀಯ ಭಾಷೆಯ ಪ್ರಾಚೀನತೆಯನ್ನು ನೋಡಿದರೆ , ಸ್ಪರ್ಧಾತ್ಮಕ ಪರೀಕ್ಷೆ ಈ ಹುದ್ದೆಗೆ ಅವರ ಜ್ಞಾನ ಮತ್ತು ಯೋಗ್ಯತೆಯನ್ನು ಪರಿಶೀಲಿಸುತ್ತದೆ.
ವಿಶೇಷ ಸೂಚನೆ : ಈ ಹುದ್ದೆಗಳು ಗ್ರೂಪ್-ಸಿ ಹುದ್ದೆಗಲಾಗಿದ್ದು ಅಭ್ಯರ್ಥಿಗಳ ದಾಖಲೆಗಳನ್ನು ಆನ್ಲೈನ್ ಅಲ್ಲಿ ನೀಡಿರುವ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.ಇಲಾಖೆ ಮುಂದೆ ಯಾವ ಸಂದರ್ಭದಲ್ಲಿಯೂ ಮೂಲ ದಾಖಲೆಗಳನ್ನು ಕೇಳಿದರೆ ನೀವು ರೆಡಿ ಮಾಡಿ ಇಟ್ಟುಕೊಂಡಿರಬೇಕು.
ಪಿಡಿಒ ಹುದ್ದೆಗೆ ಅರ್ಜಿ ಹಾಕಲು ಇಲ್ಲಿ ಒತ್ತಿ .
(KPSC PDO recruitment 2024) ಪಿಡಿಒ ಹುದ್ದೆಗೆ ಅರ್ಜಿ ಹಾಕುವುದು ಹೇಗೆ?
ಈ PDO ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು KPSC ಯ ಅಧಿಕೃತ ವೆಬ್ ಸೈಟ್ ನಲ್ಲಿ ಸಲ್ಲಿಸ ಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯಲ್ಲಿ ಎಲ್ಲಾ ಮಾಹಿತಿಯನ್ನು ಸರಿಯಾಗಿ ಒಮ್ಮೆ ಖಚಿತ ಪಡಿಸಿಕೊಳ್ಳಿ.ನಂತರ ಮೇಲೆ ನೀಡಿದ ಲಿಂಕ್ ಮೇಲೆ ಒತ್ತಿ ಅರ್ಜಿಯನ್ನು ಮುಂದುವರೆಸಿ.ಅರ್ಜಿಯನ್ನು 15/04/2024 ರಿಂದ 15/05/2024 ರ ಒಳಗೆ ಸಲ್ಲಿಸಬೇಕು.
- ಈ ಹುದ್ದೆಗಳಿಗೆ ಅರ್ಜಿಯನ್ನು KPSC ಯ ಅಧಿಕೃತ ವೆಬ್ ಸೈಟ್ ನಲ್ಲಿ ಮಾತ್ರ ಸಲ್ಲಿಸಬೇಕು.
- ಮೊದಲು KPSC ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
- ನಂತರ ಹೊಸದಾಗಿ ಅರ್ಜಿ ಹಾಕುತ್ತಿದ್ದರೆ,ನಿಮ್ಮ ಇಮೇಲ್ ಮತ್ತು ಫೋನ್ ನಂಬರ್ ಹಾಕಿ ನಿಮ್ಮನ್ನು ನೋದಾಯಿಸಿಕೊಳ್ಳಿ.
- ನಂತರ ಲಾಗಿನ್ ಆಗಿ ಅರ್ಜಿದಾರರ ವಿವರ ಎಂದು ಒತ್ತಿ ಅಲ್ಲಿ ನಿಮ್ಮ ಎಲ್ಲ್ಲಾ ವಿವರ ಭರ್ತಿ ಮಾಡಿ.
- ಇಲ್ಲಿ ಒಮ್ಮೆ ನಿಮ್ಮ ವಿವರ ಭರ್ತಿ ಮಾಡಿದ ನಂತರ ಮುಂದಿನ KPSC ಯ ಎಲ್ಲಾ ಹುದ್ದೆಗಳಿಗೆ ಅನ್ವಯವಾಗುತ್ತದೆ. ಆದ್ದರಿಂದ user ID & password ನೆನಪಿಟ್ಟುಕೊಳ್ಳಿ.
- ಅರ್ಜಿಯನ್ನು ಸಲ್ಲಿಸುವ ಮೊದಲು ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಖಚಿತ ಪಡಿಸಿಕೊಳ್ಳಿ.ನಂತರ ಅರ್ಜಿಯನ್ನು ಸಲ್ಲಿಸಿ.
- ಕೊನೆಯದಾಗಿ ನಿಮಗೆ ಅನ್ವಯವಾಗುವ ಅರ್ಜಿಯ ಶುಲ್ಕವನ್ನು ಆನ್ಲೈನ್ ಅಲ್ಲಿಯೇ ಪಾವತಿ ಮಾಡಿ. ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.
ಪಿಡಿಒ ಹುದ್ದೆಯ ಪ್ರಮುಖ ದಿನಾಂಕಗಳು :
•ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – 15/04/2024
•ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 15/05/2024
•ಈ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕವನ್ನು ಆಯೋಗದ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಲಾಗುವುದು.
ನಮ್ಮ ಈ ಮಾಧ್ಯಮದಲ್ಲಿ ಪ್ರತಿ ದಿನ ನೀಡುವ ಮಾಹಿತಿ ಯಾವುದೇ ಸುಳ್ಳನ್ನು ಹೊಂದಿರುವುದಿಲ್ಲ. ಸರ್ಕಾರದ ಅಧಿಕೃತ ವೆಬ್ ಸೈಟ್ ನಲ್ಲಿರುವ ಉದ್ಯೋಗ , ಪ್ರಚಲಿತ ಸುದ್ದಿ, ರೈತರಿಗೆ ಸಂಬಂಧಪಟ್ಟ ಮಾಹಿತಿ ಮತ್ತು ಸರ್ಕಾರದ ಎಲ್ಲಾ ಯೋಜನೆಯ ಬಗ್ಗೆ ಮಾಹಿತಿಯನ್ನು ತಕ್ಷಣ ನೀಡುತ್ತೇವೆ. ಅದ್ದರಿಂದ ನಮ್ಮ ವೆಬ್ ಸೈಟ್ ಅನ್ನು ನೋಟಿಫಿಕೇಶನ್ ಆನ್ ಇಟ್ಟುಕೊಳ್ಳಿ ಮತ್ತು ಪ್ರತಿ ದಿನ ವೆಬ್ ಸೈಟ್ ಗೆ ಭೇಟಿ ನೀಡಿ.