Anna bhagya scheme| ಮೋಬೈಲ್ ಅಲ್ಲಿ ಅನ್ನ ಭಾಗ್ಯ ಯೋಜನೆಯ ಹಣ ಚೆಕ್ ಮಾಡುವುದು ಹೇಗೆ?ಹಣ ಬಂದಿಲ್ಲ ಅಂದರೆ ಏನು ಮಾಡಬೇಕು?

Anna bhagya scheme : ಕರ್ನಾಟಕದ ಸಮಸ್ತ ಜನರಿಗೆ ನಮಸ್ಕಾರಗಳು. ಈ ಒಂದು ಲೇಖನದ ಮೂಲಕ ಅನ್ನ ಭಾಗ್ಯ ಯೋಜನೆಯ ಹಣ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಅನ್ನ ಭಾಗ್ಯ ಯೋಜನೆ ಹಣ ಬರದೆ ಇರುವವರು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ. ಈ ಯೋಜನೆಯ ಹಣ ಬಂದಿಲ್ಲ ಅಂದರೆ ಏನು ಮಾಡಬೇಕು? ಹಣ ಬಂದಿದೆಯಾ ಇಲ್ಲವಾ ಹೇಗೆ ಚೆಕ್ ಮಾಡಬೇಕು? ಎಸ್ಟು ಹಣ ಬಂದಿದೆ ಹೇಗೆ ಚೆಕ್ ಮಾಡಬೇಕು? ಈ ಅನ್ನ ಭಾಗ್ಯ ಯೋಜನೆಯ ಹಣ ಎಲ್ಲಿ ಚೆಕ್ ಮಾಡಬೇಕು? ಎಂಬ ಸಂಪೂರ್ಣ ಮಾಹಿತಿಯನ್ನೂ ಕೆಳಗೆ ನೀಡಲಾಗಿದೆ.

WhatsApp Group Join Now
Telegram Group Join Now       

ಬಹಳಷ್ಟು ಜನರಿಗೆ ಅಕ್ಕಿಯ ಹಣ ಅಂದರೆ ಅನ್ನ ಭಾಗ್ಯ ಯೋಜನೆಯ ಹಣ ಸರ್ಕಾರದಿಂದ ಬಂದರು ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ .ಇದಕ್ಕೆ ಏನು ಕಾರಣ? ಹಣ ಬರದೆ ಇರುವವರು ಏನು ಮಾಡಬೇಕು? ಹಣ ನೇರವಾಗಿ ನಿಮ್ಮ ಖಾತೆಗೆ ಬರಲು ಏನು ಮಾಡಬೇಕು? ಎಂಬ ಮಾಹಿತಿ ಕೆಳಗೆ ನೀಡಲಾಗಿದೆ.

ಸ್ನೇಹಿತರೇ ಈ ನಮ್ಮ ವೆಬ್ ಸೈಟ್ ನಲ್ಲಿ ಪ್ರತಿ ದಿನ ಜನರಿಗೆ ಉಪಯೋಗ ಆಗುವ ಮಾಹಿತಿಯನ್ನು ನೀಡುತ್ತೇವೆ.ನಾವು ನೀಡುವ ಮಾಹಿತಿ ವಿದ್ಯಾರ್ಥಿಗಳಿಗೆ,ರೈತರಿಗೆ,ಉದ್ಯೋಗ ಹುಡುಕುತ್ತಿರುವವರಿಗೆ ತುಂಬಾ ಸಹಕಾರಿಯಾಗಿವೆ.ನಿಮಗೂ ನಮ್ಮ ಮಾಹಿತಿ ಉಪಯುಕ್ತ ಅನಿಸಿದರೆ ನಮ್ಮ ವೆಬ್ ಸೈಟ್ ಗೆ ಪ್ರತಿ ದಿನ ಬೇಟಿ ನೀಡಿ ಮತ್ತು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಶೇರ್ ಮಾಡಿ.

ಅನ್ನ ಭಾಗ್ಯ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದ್ದು, ಈ ಅನ್ನ ಭಾಗ್ಯ ಯೋಜನೆಯ(Anna bhagya scheme) ಮೂಲಕ ಪ್ರತಿ ಒಬ್ಬರಿಗೆ ಎಸ್ಟು ಹಣ ಬರುತ್ತದೆ? ಯಾರಿಗೆ ಈ ಯೋಜನೆಯ ಹಣ ಬರುತ್ತದೆ? ಹೇಗೆ ಬರುತ್ತದೆ? ಅನ್ನ ಭಾಗ್ಯ ಯೋಜನೆಯ ಹಣ ಯಾವಾಗ ಬರುತ್ತದೆ? ಎಂಬ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಅನ್ನ ಭಾಗ್ಯ ಯೋಜನೆಯ(Anna bhagya scheme) ಹಣ ಈಗಾಗಲೇ ಪಡಿತರ ಚೀಟಿ ಹೊಂದಿದ ಪ್ರತಿಯೊಬ್ಬ ಕುಟುಂಬದ ಹಿರಿಯ ಮಹಿಳೆಯ ಖಾತೆಗೆ ಜಮಾ ಮಾಡಲಾಗಿದೆ. ನಿಮಗು ಕೂಡ  ಹಣ ಜಮ ಆಗಿದೆಯಾ ಇಲ್ಲವಾ ಎಂದು ತಿಳಿಯಲು ಏನು ಮಾಡಬೇಕು? ಮತ್ತು ಹಣ ಬಂದಿಲ್ಲ ಅಂದರೆ ಏನು ಮಾಡಬೇಕು ಎಂಬ ಮಾಹಿತಿ ಈ ವರದಿಯಲ್ಲಿ ನೀಡಲಾಗಿದೆ.

 

ಅನ್ನ ಭಾಗ್ಯ ಯೋಜನೆ(Anna bhagya scheme) ಅಂದರೆ ಏನು?

ಎಲ್ಲರಿಗೂ ತಿಳಿದಂತೆ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ  2023 ರ ವಿಧಾನ ಸಭೆ ಚುನಾವಣೆ ಮೊದಲು ಒಟ್ಟು ಐದು ಗ್ಯಾರಂಟಿಗಳನ್ನು ನೀಡಿತ್ತು . ಅದರಲ್ಲಿ ಅನ್ನ ಭಾಗ್ಯ ಯೋಜನೆಯು ಒಂದಾಗಿದೆ. ಯೋಜನೆಯ ಮೂಲಕ ಕರ್ನಾಟಕದಲ್ಲಿ ಪಡಿತರ ಚೀಟಿ ಹೊಂದಿದ ಜನರ ಕುಟುಂಬಕ್ಕೆ ತಲಾ ಒಬ್ಬ ಸದಸ್ಯನಿಗೆ 10 ಕೆಜಿ ಅಕ್ಕಿಯನ್ನು ಪ್ರತಿ ತಿಂಗಳು ನೀಡುವ ಉದ್ದೇಶವನ್ನು, ಹೊಂದಿತ್ತು. ಆದರೆ ರಾಜ್ಯದಲ್ಲಿ ಅಕ್ಕಿಯ ಕೊರತೆಯಿಂದ 10 ಕೆಜಿ ಅಕ್ಕಿಯ  ಬದಲಿಗೆ ಪ್ರತಿ ಒಬ್ಬ ರೇಷನ್ ಕಾರ್ಡ್ ಹೊಂದಿದ ಸದಸ್ಯನಿಗೆ 5 ಕೆಜಿ  ಮತ್ತು ಇನ್ನುಳಿದ 5ಕೆಜಿ ಅಕ್ಕಿಯ ಹಣವನ್ನು ರೇಷನ್ ಕಾರ್ಡ್ ಹೊಂದಿದ ಕುಟುಂಬದ ಹಿರಿಯ ಮಹಿಳೆಯ ಬ್ಯಾಂಕ್ ಖಾತೆಗೆ ಅನ್ನ ಭಾಗ್ಯ ಯೋಜನೆ ಹಣ ನೇರವಾಗಿ ಜಮಾ ಆಗುತ್ತದೆ.ಪ್ರತಿ ಒಬ್ಬ ರೇಷನ್ ಕಾರ್ಡ್ ಸದಸ್ಯನಿಗೆ 170 ರೂಪಾಯಿ ಪ್ರತಿ ತಿಂಗಳಿಗೆ ಜಮಾ ಆಗುತ್ತದೆ.

ಈ ತಿಂಗಳಿನ ಅನ್ನ ಭಾಗ್ಯ ಯೋಜನೆಯ ಹಣ 10 ಮಾರ್ಚ್ 2024 ರಂದು ಜಮಾ ಆಗಿದೆ.ನಿಮಗೂ ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗಿದೆಯಾ ಇಲ್ಲವೋ ಎಂದು ತಿಳಿದುಕೊಳ್ಳಲು ಏನು ಮಾಡಬೇಕು? ಎಂದು ಈ ಕೆಳಗೆ ನೀಡಲಾಗಿದೆ.

WhatsApp Group Join Now
Telegram Group Join Now       

Anna bhagya scheme

ಅನ್ನ ಭಾಗ್ಯ ಯೋಜನೆ ವಿವರ :

ಈ ಯೋಜನೆಯನ್ನೂ ಮೊದಲು ಕೆಂದ್ರ ಸರ್ಕಾರವು ಬದ ಕುಟುಂಬಗಳಿಗೆ ಅಕ್ಕಿಯನ್ನು ಮೊದಲು ಆರಂಭ ಮಾಡಿತ್ತು. ಅದನ್ನು ಕಾಂಗ್ರೆಸ್ ಸರ್ಕಾರವು 2023 ರ ವಿಧಾನಸಭೆ ಚುನಾವಣೆಯ ಮೊದಲು ಗ್ಯಾರಂಟೀ ಯೋಜನೆಗಳಲ್ಲಿ ಇದನ್ನು ಘೋಷಣೆ ಮಾಡಿತ್ತು . ಈ ಯೋಜನೆಯ ಮೂಲಕ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿತ್ತು.ಆದರೆ ರಾಜ್ಯದಲ್ಲಿ ಅಕ್ಕಿಯ ಅಭಾವದಿಂದ 5 ಕೆಜಿ ಅಕ್ಕಿಯ ಹಣವನ್ನು ಒಬ್ಬ ಸದಸ್ಯನಿಗೆ 170 ಪ್ರತಿ ತಿಂಗಳಿಗೆ ಹಾಕುತ್ತಿದೆ.ಇದರಂತೆ ಒಬ್ಬರಿಗೆ 170 ರೂಪಾಯಿ ಅಂತೆ ಕುಟುಂಬದ ರೇಷನ್ ಕಾರ್ಡ್ ಅಲ್ಲಿರುವಸ್ಟು ಜನರಿಗೆ ಸೇರಿ ಅದ ಹಣ ಕುಟುಂಬದ ಹಿರಿಯ ಮಹಿಳೆಯ ಖಾತೆಗೆ ನೇರವಾಗಿ ಜಮಾ ಆಗುತ್ತದೆ.

ಉದಾಹರಣೆಗೆ : ಒಂದು ಕುಟುಂಬದ ರೇಷನ್ ಕಾರ್ಡ್ ನಲ್ಲಿ 4 ಜನ ಸದಸ್ಯರಿದ್ದರೆ ಪ್ರತಿ ಒಬ್ಬರಿಗೆ ತಿಂಗಳಿಗೆ 170 ರೂಪಾಯಿ ಅಂತೆ ಒಟ್ಟು 680 ರೂ. ಕುಟುಂಬದ ಹಿರಿಯ ಮಹಿಳೆಗೆ ನೀಡಲಾಗುತ್ತದೆ.

ಈ ಅನ್ನ ಭಾಗ್ಯ ಯೋಜನೆಯ (Anna bhagya scheme) ಮುಖಾಂತರ ಒಟ್ಟು 5 ಕಂತಿನ ಹಣ ವರ್ಗಾವಣೆ ಮಾಡಲಾಗಿದೆ.ಜನೆವರಿ 2024 ರ ಅನ್ನ ಭಾಗ್ಯ ಯೋಜನೆಯ ಹಣವನ್ನು ಮಾರ್ಚ್ 15 ನೆಯ ತಾರೀಕು ಜಮಾ ಮಾಡಲಾಗುತ್ತದೆ. ಫೆಬ್ರವರಿ ಮತ್ತು ಮಾರ್ಚ್ ಹಣ ಏಪ್ರಿಲ್ ನಲ್ಲಿ ಬಿಡುಗಡೆ ಮಾಡಲಾಗುವುದು.

(ಜನೆವರಿ ತಿಂಗಳ ಅನ್ನ ಭಾಗ್ಯ ಯೋಜನೆಯ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು .ಕೆಲವು ಫಲಾನುಭವಿಗಳಿಗೆ ಖಾತೆಗೆ ಇನ್ನೂ ಜಮ ಆಗಿಲ್ಲ .ಅಂತವರು ನಿಮ್ಮ ಖಾತೆಯ ಅನ್ನ ಭಾಗ್ಯ ಯೋಜನೆಯ ಹಣವನ್ನು ಚೆಕ್ ಮಾಡಿಕೊಳ್ಳಿ. ಈ ಜನೆವರಿ ತಿಂಗಳ pending ಅನ್ನ ಭಾಗ್ಯ ಯೋಜನೆಯಾನ್ನು ಹಣವನ್ನು  ಮಾರ್ಚ್ 30 2024 ರ ಕೆಳಗೆ ಬಿಡಲಾಗುತ್ತದೆ.ಎಂದು ಆಹಾರ ಮತ್ತು ನಾಗರಿಕ ಸಚಿವರು ತಿಳಿಸಿದ್ದಾರೆ.

 

ಅಕ್ಕಿಯ ಹಣ ಚೆಕ್ ಮಾಡಲು ಇಲ್ಲಿ ಒತ್ತಿ.

              👉👉 ಅನ್ನ ಭಾಗ್ಯ ಸ್ಟೇಟಸ್👈👈👈

 

ಅನ್ನ ಭಾಗ್ಯ ಯೋಜನೆ ಹಣ ಮೊಬೈಲ್ ಅಲ್ಲಿ ಹೇಗೆ ಚೆಕ್ ಮಾಡಬೇಕು?

1. ಅನ್ನ ಭಾಗ್ಯ ಯೋಜನೆ ಹಣ ಮೊಬೈಲ್ ಅಲ್ಲಿ ಚೆಕ್ ಮಾಡಲು ಮೇಲೆ ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿ.

2. ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಎಂಟರ್ ಮಾಡಿ.

3. ನಂತರ ನೀವು ಯಾವ ತಿಂಗಳ ಅಕ್ಕಿ ಹಣ ಚೆಕ್ ಮಾಡಬೇಕು ಆ ತಿಂಗಳು ಮತ್ತು ವರ್ಷ ಆಯ್ಕೆ ಮಾಡಿಕೊಳ್ಳಿ.

4. ನಂತರ ಕಾಣಿಸುವ ಒಂದು ಕ್ಯಾಪ್ಟ್ಕ ಕೋಡ್ ಹಾಕಿ. ಎಂಟರ್ ಮಾಡಿ.

5. ಅಲ್ಲಿ ನಿಮ್ಮ ಎಲ್ಲಾ ಅನ್ನಭಾಗ್ಯ ಯೋಜನೆ ಹಣ ಕುರಿತು ಮಾಹಿತಿ ನಿಮಗೆ ತಿಳಿಯುತ್ತದೆ.

 

ಯಾರಿಗೆ ಅನ್ನ ಭಾಗ್ಯ ಯೋಜನೆ ಹಣ ಬರುತ್ತದೆ?

•ಅನ್ನ ಭಾಗ್ಯ ಯೋಜನೆ ಅರ್ಜಿ ಹಾಕಲು APL, BPL, AAY ಯಾವುದಾದರೊಂದು ರೇಷನ್ ಕಾರ್ಡ್ ಇರಬೇಕು.

•ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರು ಕರ್ನಾಟಕದ ನಿವಾಸಿ ಆಗಿರಬೇಕು(ಕಡ್ಡಾಯವಾಗಿ).

•ಈ ಯೋಜನೆಗೆ ಅರ್ಜಿ ಹಾಕುವ ಮಹಿಳೆಯ ಕುಟುಂಬದ ವಾರ್ಷಿಕ ಆದಾಯವು 2 ಲಕ್ಷಕ್ಕಿಂತ ಕಡಿಮೆ ಇರಬೇಕು.

•ಅನ್ನ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯ ಕುಟುಂಬ ಯಾವುದೇ ರೀತಿಯ ಆದಾಯ ತೆರಿಗೆ ಪಾವತಿ ಮಾಡುತ್ತಿರಬರದು.

•ಅರ್ಜಿ ಸಲ್ಲಿಸುವ ಮಹಿಳೆಯ  ಕುಟುಂಬದಲ್ಲಿ ಹಿರಿಯ ಮಹಿಳೆ ಆಗಿರಬೇಕು.

• ಈ ಅನ್ನ ಭಾಗ್ಯ ಯೋಜನೆಗೆ ಬಿಪಿಎಲ್ ,ಎಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಈ ಮೂರರಲ್ಲಿ ಯಾವುದಾದರೊಂದು ರೇಷನ್ ಕಾರ್ಡ್ ಇದ್ದರೂ ಕೂಡ ಅರ್ಜಿಯನ್ನು ಹಾಕಲು ಕಾಂಗ್ರೆಸ್ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

•ಅನ್ನ ಭಾಗ್ಯ ಯೋಜನೆಗೆ ಅರ್ಜಿ ಹಾಕುವ ಮಹಿಳೆಯರು ಮೇಲಿನ ಮೂರರಲ್ಲಿ ಒಂದು ರೇಷನ್ ಕಾರ್ಡ್ ಹೊಂದಿರಲೆ ಬೇಕು.

ಯಾರಿಗೆ ಅನ್ನ ಭಾಗ್ಯ ಯೋಜನೆ(Anna bhagya scheme) ಹಣ ಬರುವುದಿಲ್ಲ?

•ಆದಾಯ ತೆರಿಗೆ ಪಾವತಿ ಮಾಡುವವರು ಹಣ ಬರುವುದಿಲ್ಲ.

•ಸರ್ಕಾರಿ ನೌಕರರು ಕುಟುಂಬದ ಮಹಿಳೆಯರಿಗೆ ಅನ್ನ ಭಾಗ್ಯ ಯೋಜನೆ  ಹಣ ಬರುವುದಿಲ್ಲ.

• ಮಹಿಳೆಯ ಕುಟುಂಬದಲ್ಲಿ ಯಾವುದೇ ನಾಲ್ಕು ಚಕ್ರವಾಹನ ಇರಬಾರದು.

ಈ ಮೇಲೆ ನೀಡಿರುವ ಯಾವುದಾದರೂ ಆಯ್ಕೆಗೆ ನೀವು ಒಳಪಟ್ಟರೆ ನಿಮಗೆ ಅನ್ನ ಭಾಗ್ಯ ಯೋಜನೆ ಯೋಜನೆ ಹಣ ಬರುವುದಿಲ್ಲ.

ಅನ್ನಭಾಗ್ಯ ಯೋಜನೆ( ಹಣ ಬಂದಿಲ್ಲ ಅಂದರೆ ಏನು ಮಾಡಬೇಕು?
  • ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ರೇಷನ್ ಕಾರ್ಡ್ ಕೆ.ವೈ.ಸಿ. ಆಗಿದೆಯೋ ಎಂದು ಚೆಕ್ ಮಾಡಿ. ಆಗಿಲ್ಲ ಅಂದರೆ ನಿಮ್ಮ ನ್ಯಾಯ ಬೆಲೆ ಅಂಗಡಿಯಲ್ಲಿ KYC ಮಾಡಿಸಿ.
  • ಅನ್ನ ಭಾಗ್ಯ ಯೋಜನೆ ಹಣ ಪಡೆಯಲು ನಿಮ್ಮ ಕುಟುಂಬದ ಹಿರಿಯ ಮಹಿಳೆಯ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿ.
  • ಅನ್ನ ಭಾಗ್ಯ ಯೋಜನೆ ಹಣ ಪಡೆಯಲು ಪ್ರತಿ ತಿಂಗಳು ನೀವು ನ್ಯಾಯ ಬೆಲೆ ಅಂಗಡಿಯಲ್ಲಿ ರಾಶನ್ ತೆಗೆದುಕೊಳ್ಳಬೇಕು.
  • ಅಕ್ಕಿ ಹಣ ಪಡೆಯಲು ನಿಮ್ಮ ಕುಟುಂಬದ ಹಿರಿಯ ಮಹಿಳೆಯ ಬ್ಯಾಂಕ್ ಖಾತೆಗೆ NPCI ಮಾಡಿಸಿ.

 

ಈ ಮೇಲೆ ನೀಡಿದ ಎಲ್ಲಾ ಮಾಹಿತಿಯನ್ನು ಸರಿಯಾಗಿ ನೋಡಿಕೊಂಡು ,ಎಲ್ಲಾ ರೂಲ್ಸ್ ಗಳನ್ನ್ನು ಪಾಲಿಸಿದರೆ ನಿಮಗೆ ಪ್ರತಿ ತಿಂಗಳ ಅನ್ನ ಭಾಗ್ಯ ಯೋಜನೆ (Anna bhagya scheme  ) ಹಣ ಕಂಡಿತ ಬರುತ್ತದೆ.

 

ಸ್ನೇಹಿತರೇ ಈ ನಮ್ಮ ವೆಬ್ ಸೈಟ್ ನಲ್ಲಿ ಪ್ರತಿ ದಿನ ಜನರಿಗೆ ಉಪಯೋಗ ಆಗುವ ಮಾಹಿತಿಯನ್ನು ನೀಡುತ್ತೇವೆ.ನಾವು ನೀಡುವ ಮಾಹಿತಿ ವಿದ್ಯಾರ್ಥಿಗಳಿಗೆ,ರೈತರಿಗೆ,ಉದ್ಯೋಗ ಹುಡುಕುತ್ತಿರುವವರಿಗೆ ತುಂಬಾ ಸಹಕಾರಿಯಾಗಿವೆ.ನಿಮಗೂ ನಮ್ಮ ಮಾಹಿತಿ ಉಪಯುಕ್ತ ಅನಿಸಿದರೆ ನಮ್ಮ ವೆಬ್ ಸೈಟ್ ಗೆ ಪ್ರತಿ ದಿನ ಬೇಟಿ ನೀಡಿ ಮತ್ತು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಶೇರ್ ಮಾಡಿ.

ಪ್ರತಿಯೊಬ್ಬರಿಗೆ ಉಚಿತ ಮನೆ ಸಿಗುತ್ತದೆ ಈ ರೀತಿ ಅರ್ಜಿ ಹಾಕಲು ಇದರ ಮೇಲೆ ಕ್ಲಿಕ್ ಮಾಡಿ

Leave a Comment