KPSC ಲ್ಯಾಂಡ್ ಸರ್ವೇಯರ್ 2024 ರಲ್ಲಿ ಒಟ್ಟು 364 ಸರ್ವೇಯರ್ ಹುದ್ದೆಗಳ ಭರ್ತಿಗೆ KPSC ಯ ಅಧಿಕೃತ ವೆಬ್ ಸೈಟ್ ನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. 11 ಮಾರ್ಚ್ 2024 ರಿಂದ ಈ ಅರ್ಜಿಗಳು ಪ್ರಾರಂಭವಾಗಿದ್ದು 10 ಏಪ್ರಿಲ್ 2024 ರ ದಿನಾಂಕದ ತನಕ ಈ ಲ್ಯಾಂಡ್ ಸರ್ವೇಯರ್ ಹುದ್ದೆಗೆ(Land surveyor job recruitment 2024) ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತಿ ಇರುವ ಮತ್ತು ಕೆಳಗೆ ನೀಡಿದ ಅರ್ಹತೆಗಳನ್ನು ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಆದ್ದರಿಂದ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.
ನಮಸ್ಕಾರ ಸ್ನೇಹಿತರೇ ಈ ಒಂದು ಮಾಹಿತಿಯ ಮೂಲಕ ತಿಳಿಸುವುದು ಏನೆಂದರೆ ಕಂದಾಯ ಇಲಾಖೆಯ ಭೂಮಾಪನ ಇಲಾಖೆಯಲ್ಲಿ(Land surveyor job recruitment 2024) ಖಾಲಿ ಇರುವ ಒಟ್ಟು 364 ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವ ಅರ್ಹತೆ ಬೇಕು?ಯಾವ ದಾಖಲಾತಿಗಳು ಬೇಕು?ಅರ್ಜಿಗೆ ಶುಲ್ಕ ಎಸ್ಟು?ಅರ್ಜಿ ಎಲ್ಲಿ ಹಾಕುವುದು? ಅರ್ಜಿಯನ್ನು ಹೇಗೆ ಹಾಕುವುದು ? ಮತ್ತು ಲ್ಯಾಂಡ್ ಸರ್ವೇಯರ್ ಹುದ್ದೆಗೆ ಅರ್ಜಿ ಹಾಕಲು ಕೊನೆಯ ದಿನಾಂಕ ಯಾವಾಗ? ಎಂಬ ಸಂಪೂರ್ಣ ಮಾಹಿತಿಯನ್ನೂ ನೀಡಲಾಗಿದೆ.
ಈ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವುದು ಎಲ್ಲರ ಆಸೆಯಾಗಿದೆ.ಅದರಲ್ಲಿ ಈ ಭೂಮಾಪನ ಇಲಾಖೆಯ ಸರ್ವೇಯರ್(Land surveyor job recruitment 2024) ಹುದ್ದೆಗೆ ಸೇರಿಕೊಳ್ಳಬೇಕು ಎನ್ನುವುದು ಬಹಳ ಜನರ ಆಸೆ ಆಗಿರುತ್ತೆ.ಅಂತವರಿಗೆ ಸರ್ಕಾರ ಇದೀಗ ಗುಡ್ ನ್ಯೂಸ್ ನೀಡಿದೆ.ಏನೆಂದರೆ ಭೂಮಾಪನ ಇಲಾಖೆಯಲ್ಲಿ ಒಟ್ಟು 364 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ.ಕೊನೆಯ ದಿನಾಂಕದ ಒಳಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಿ.
ಈ ಭೂಮಾಪನ ಇಲಾಖೆಯಲ್ಲಿ ಎಲ್ಲಿ ,ಎಸ್ಟು ಹುದ್ದೆಗಳು ಖಾಲಿ ಇವೆ? ಅರ್ಜಿ ಶುಲ್ಕ, ಅರ್ಜಿ ಹಾಕಲು ಯಾವ ಏನಿರದಾಖಲೆಗಳು ಬೇಕು? ಅರ್ಜಿ ಹಾಕಲು ಶೈಕ್ಷಣಿಕ ಅರ್ಹತೆಗಳುಬೇಕು?ಅರ್ಜಿಯನ್ನು ಹೇಗೆ ಹಾಕುವುದು ?ಅರ್ಜಿಹಾಕಲು ಕೊನೆಯ ದಿನಾಂಕ ಯಾವಾಗ? ಇದಕ್ಕೆ ಸಂಬಂಧ ಪಟ್ಟ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಈ ಕೆಳಗೆ ನೀಡಲಾಗಿದೆ.
ಕರ್ನಾಟಕದ ಕಂದಾಯ ಇಲಾಖೆಯಲ್ಲಿ ಒಟ್ಟು 364 ಭೂಮಾಪನ ಹುದ್ದೆಗಳಿಗೆ ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಲು ಯಾವ ಡಾಕ್ಯುಮೆಂಟ್ ಬೇಕು? ಅರ್ಜಿ ಹಾಕಲು ಶೈಕ್ಷಣಿಕ ಅರ್ಹತೆಗಳು ಏನಿರಬೇಕು?ಪ್ರತಿ ತಿಂಗಳ ಸಂಬಳ ಎಸ್ಟು? ಮುಂತಾದ ಮಾಹಿತಿಯನ್ನು ಈ ವರದಿಯಲ್ಲಿ ನೀಡಲಾಗಿದೆ.ಆದ್ದರಿಂದ ಆಸಕ್ತಿ ಇರುವವರು ಮತ್ತು ಅರ್ಹತೆಗಳನ್ನು ಹೊಂದಿದವರು ಈ ಮಾಹಿತಿ ಸಂಪೂರ್ಣವಾಗಿ ಓದಿ.
KPSC ಲ್ಯಾಂಡ್ ಸರ್ವೇಯರ್ ನೇಮಕಾತಿ 2024
ಕರ್ನಾಟಕ ಲೋಕ ಸೇವಾ ಆಯೋಗವು (KPSC) ಕಂದಾಯ ಇಲಾಖೆಯಲ್ಲಿನ ಒಟ್ಟು 364 ಭೂಮಾಪಕರ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆದಿದೆ.ದಿನಾಂಕ 11 ಮಾರ್ಚ್ 2024 ರಂದು ಈ ಹುದ್ದೆಗಳಿಗೆ ಅರ್ಜಿ ಪ್ರಾರಂಭವಾಗಿದ್ದು 10 ಏಪ್ರಿಲ್ 2024 ರ ತನಕ ಅರ್ಜಿಯನ್ನು ಸಲ್ಲಿಸಲು ಸರ್ಕಾರ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಮಾಡಿ ಕೊಟ್ಟಿದೆ.
ಭೂಮಾಪಕರ :ಕಂದಾಯ ಇಲಾಖೆಯ ಒಂದು ಹುದ್ದೆಯಾಗಿದ್ದು, ಈ ಹುದ್ದೆಗೆ ಸೇರುವವರು ರೈತರು ಅಥವಾ ಯಾವುದೇ ಆಸ್ತಿ,ಜಮೀನುಗಳು ಮತ್ತು ಇನ್ನಿತರ ಜಾಗಗಳ ಎಲ್ಲಾ ದಾಖಲೆಗಳನ್ನು ಅಳತೆ ಮಾಡುವುದು,ತಯಾರು ಮಾಡುವುದು,ಇವರ ಕೆಲಸ ಆಗಿರುತ್ತದೆ.
ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಪಡೆಯಲು ಇಲ್ಲಿದೆ ಸಂಪೂರ್ಣ ಮಾಹಿತಿ ಇದರ ಮೇಲೆ ಕ್ಲಿಕ್ ಮಾಡಿ
ಲ್ಯಾಂಡ್ ಸರ್ವೇಯರ್ (Land surveyor job recruitment 2024) ಖಾಲಿ ಇರುವ ಹುದ್ದೆಗಳು ಯಾವುವು ?
ಕಂದಾಯ ಇಲಾಖೆಯ ಭೂಮಾಪಕರ ಹುದ್ದೆಗಳು ಖಾಲಿ ಇದ್ದು ಒಟ್ಟು 364 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.ಅದರಲ್ಲಿ 264 ಹುದ್ದೆಗಳು ಎಲ್ಲರಿಗೂ ಅನ್ವಯಿಸುತ್ತವೆ(ರಾಜ್ಯಾದ್ಯಂತ)ಮತ್ತು 100 ಹುದ್ದೆಗಳು ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ (HK) ಮಾತ್ರ ಸೀಮಿತವಾಗಿವೆ.ಇದರಲ್ಲಿ ಯಾವ ಹುದ್ದೆಗೆ ಏನು ಅರ್ಹತೆಗಳು ಬೇಕು? ಏನು ದಾಖಲೆಗಳು ಬೇಕು?ಹೇಗೆ ಅರ್ಜಿ ಹಾಕಬೇಕು?ಯಾವ ಹುದ್ದೆಗೆ ಎಸ್ಟು ಸಂಬಳ? ಈ ಎಲ್ಲಾ ಮಾಹಿತಿ ಈ ವರದಿಯಲ್ಲಿ ನೀಡಲಾಗಿದೆ.
1. ಲ್ಯಾಂಡ್ ಸರ್ವೇಯರ್ (HK). – 100 ಹುದ್ದೆಗಳು
2. ಲ್ಯಾಂಡ್ ಸರ್ವೇಯರ್ (RPC). – 264 ಹುದ್ದೆಗಳು
KPSC ಲ್ಯಾಂಡ್ ಸರ್ವೇಯರ್ ಹುದ್ದೆಗೆ ಬೇಕಾದ ಶೈಕ್ಷಣಿಕ ಅರ್ಹತೆಗಳು ಏನು?
ಕರ್ನಾಟಕ ಲೋಕ ಸೇವಾ ಆಯೋಗವು ಈ ಭೂಮಾಪಕರ ಹುದ್ದೆಗೆ ಕೆಲವು ಅರ್ಹತಾ ಮಾನದಂಡಗಳು ನೀಡಿದ್ದು. ಈ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿದವರು ಈ ಹುದ್ದೆಗಳಿಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ.ಅರ್ಹತೆಗಳು ಕೆಳಗಿನಂತಿವೆ.
•ಭಾರತದಲ್ಲಿ ಕಾನೂನು ರೀತಿಯಲ್ಲಿ ಸ್ಥಾಪಿತವಾದ ಯಾವುದೇ ವಿಧ್ಯಾಸಂಸ್ಥೆಯಿಂದ ಬಿ.ಇ/ಬಿ.ಟೆಕ್ /ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾ ಅಲ್ಲಿ ಪಾಸಾಗಿರಬೇಕು.
ಅಥವ
•ಪಿ.ಯು.ಸಿ ಅಲ್ಲಿ ವಿಜ್ಞಾನ ವಿಷಯವನ್ನು ಪಡೆದು ಗಣಿತದಲ್ಲಿ ಶೇಕಡ 60% ಅಂಕಗಳಿಗೆ ಕಡಿಮೆ ಇಲ್ಲದೆ ಪಾಶಾಗಿರಬೇಕು.
ಅಥವಾ
•ನಮ್ಮ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ “ಲ್ಯಾಂಡ್ ಅಂಡ್ ಸಿಟಿ ಸರ್ವೆ” ಕೋರ್ಸ್ ಅನ್ನು ಡಿಪ್ಲೊಮಾ ಅಲ್ಲಿ ಪಾಸವಿರಬೇಕು.
ಅಥವಾ
•ನಮ್ಮ ರಾಜ್ಯ ಸರ್ಕಾರದ ಉದ್ಯೋಗ ತರಬೇತಿ ಇಲಾಖೆಯು ನಡೆಸುವ “ಐ.ಟಿ.ಐ ಇನ್ ಸರ್ವೆ ಟ್ರೇಡ್” ಅಲ್ಲಿ ಪಾಸಾಗಿರಬೇಕೂ.
(Land surveyor job recruitment 2024) ಲ್ಯಾಂಡ್ ಸರ್ವೇಯರ್ ಅರ್ಜಿ ಹಾಕಲು ಎಸ್ಟು ವಯಸ್ಸಿರಬೇಕು?
KPSC ಲ್ಯಾಂಡ್ ಸರ್ವೇಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕರ್ನಾಟಕ ನಾಗರಿಕ ಸೇವೆಗಳಲ್ಲಿ ಹೇಳಿದಂತೆ ಆಯಾ ವರ್ಗದ ಮುಂದೆ ನೀಡಿರುವ ದಿನಾಂಕ ಅರ್ಜಿ ಹಾಕುವ ಸಂದರ್ಭದಲ್ಲಿ ಅಭ್ಯರ್ಥಿಗಳು ಹೊಂದಿರಬೇಕು.ಎಲ್ಲಾ ವರ್ಗದವರಿಗೆ ಕನಿಷ್ಟ ವಯಸ್ಸು 18 ಆಗಿರಬೇಕು.
ಇರಬೇಕಾದ ಗರಿಷ್ಠ ವಯಸ್ಸು :
•ಸಾಮನ್ಯ ವರ್ಗದವರು. – 35 ವರ್ಷ
•ಪ್ರವರ್ಗ 2(ಎ),2(ಬಿ),3(ಎ),3(ಬ) – 38 ವರ್ಷ
•SC/ST/ಪ್ರವರ್ಗ -1. – 40 ವರ್ಷ
ಅರ್ಜಿ ಹಾಕಲು ಬೇಕಾಗುವ ದಾಖಲೆಗಳು ಯಾವುವು ?
1. ಆಧಾರ್ ಕಾರ್ಡ್ &ಫೋನ್ ನಂಬರ್
2. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
3. ಗ್ರಾಮೀಣ ಮಾದ್ಯಮ (ಇದ್ದರೆ)
4. ಕನ್ನಡ ಮಾಧ್ಯಮ (ಇದ್ದರೆ)
5. ಮಾಜಿ ಸೈನಿಕ ಪ್ರಮಾಣ ಪತ್ರ (ಇದ್ದರೆ)
6. ಅಂಗವಿಕಲ ಪ್ರಮಾಣ ಪತ್ರ (ಇದ್ದರೆ)
7. ಅನ್ವಯವಾಗುವ ಮಾರ್ಕ್ಸ್ ಕಾರ್ಡ್ ಗಳು.
ಸೂಚನೆ : ಈ KPSC ಲ್ಯಾಂಡ್ ಸರ್ವೇಯರ್ ಹುದ್ದೆಯಲ್ಲಿನ HK ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದರು ಹೈದರಾಬಾದ್ ಕರ್ನಾಟಕ ಮೀಸಲಾತಿ ಪ್ರಮಾಣ ಪತ್ರ (371 )ಕಡ್ಡಾಯವಾಗಿ ಹೊಂಡಿರಲೇಬೇಕು.
ಗಮನಿಸಿ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ವಿದ್ಯಾರ್ಹತೆ ಪ್ರಮಾಣ ಪತ್ರ,ವಯೋಮಿತಿ ಸಂಭಂದಿಸಿದ ಪ್ರಮಾಣ ಪತ್ರ,ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳ ಅರ್ಜಿ ಹಾಕುವ ಸಂದರ್ಭದಲ್ಲಿ ಚಾಲ್ತಿ ಇರುವಂತೆ ಇಟ್ಟುಕೊಂಡು ಅರ್ಜಿಯನ್ನು ಹಾಕಬೇಕು.
KPSC ಲ್ಯಾಂಡ್ ಸರ್ವೇಯರ್ ಆಯ್ಕೆ ಪ್ರಕ್ರಿಯೆ ಹೇಗೆ?
1.ಕನ್ನಡ ಭಾಷಾ ಪರೀಕ್ಷೆ : ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ಕಡ್ಡಾಯವಾಗಿದ್ದು ,ಇದರಲ್ಲಿ ಅರ್ಹತೆ ಪಡೆಯದೆ ಇದ್ದರೆ ಆಯ್ಕೆಗೆ ಅರ್ಹ ಆಗುವುದಿಲ್ಲ . ಈ ಪರೀಕ್ಷೆಯಲ್ಲಿ 150 ಅಂಕಾಗಳಿದ್ದು ಅಭ್ಯರ್ಥಿಗಳು ಅರ್ಹತೆ ಪಡೆಯಲು ಕನಿಷ್ಟ 50 ಅಂಕಗಳನ್ನು ಪಡೆಯಬೇಕು.
2.ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ,ಅದರಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಹಾಗೂ ಅವರಿಗೆ ಅನ್ವಯವಾಗುವ ಮೀಸಲಾತಿಗಳ ಮೇಲೆ ಆಯ್ಕೆ ಮಾಡಲಾಗುವುದು.
ಸೂಚನೆ : ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಯ್ಕೆ ಆಗಲು ಕನ್ನಡ ಭಾಷಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಅರ್ಹತೆಯನ್ನು ಪಡೆದಿರಲೇಬೇಕು.
(Land surveyor job recruitment 2024) ತಿಂಗಳ ವೇತನ ಎಸ್ಟು?
ಈ ಲ್ಯಾಂಡ್ ಸರ್ವೇಯರ್ ಹುದ್ದೆಗಳಿಗೆ ಅರ್ಜಿ ಹಾಕಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳು ಕೆಳಗೆ ಸೂಚಿಸಿದ ವೇತನವನ್ನು ಪ್ರತಿ ತಿಂಗಳಿಗೆ ಪಡೆಯುತ್ತಾರೆ.
•ಲ್ಯಾಂಡ್ ಸರ್ವೇಯರ್ ಹುದ್ದೆಗಳು (HK) ಮತ್ತು ಲ್ಯಾಂಡ್ ಸರ್ವೇಯರ್ (RPC) ಹುದ್ದೆಗಳಿಗೆ ಆಯ್ಕೆಯಾದವರು ಪ್ರತಿ ತಿಂಗಳು ಸುಮಾರು 23,500 – 47,650 ರೂಪಾಯಿ ಪಡೆಯುತ್ತಾರೆ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು ಯಾವುವು?
ಲ್ಯಾಂಡ್ ಸರ್ವೇಯರ್ 364 ಹುದ್ದೆಗಳ ಅಧಿಸೂಚನೆಯನ್ನು KPSC ಹೊರಡಿಸಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು ಕೆಳಗಿನಂತಿವೆ .
1.ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ. – 11/03/2024
2.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 10/04/2024
3.ಕನ್ನಡ ಭಾಷಾ ಪರೀಕ್ಷೆ ದಿನಾಂಕ – 20/07/2024
4.ತತ್ಪೂರ್ವಿಕ ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ – 21/07/2024
ಈ ಮೇಲೆ ನಿಗದಿ ಪಡಿಸಿದ ದಿನಾಂಕಗಳು KPSC ಅಧಿಕೃತ ಅಧಿಸೂಚನೆ ಅಲ್ಲಿನ ದಿನಾಂಕಗಳು ಆಗಿವೆ.
(Land surveyor job recruitment 2024)ಅರ್ಜಿಯ ಶುಲ್ಕ ಎಸ್ಟು ?
ಶುಲ್ಕ :
•ಸಾಮನ್ಯ ವರ್ಗದವರಿಗೆ – 600 ರೂಪಾಯಿ
•ಪ್ರವರ್ಗ 2(ಎ),2(ಬಿ),3(ಎ),3(ಬಿ) – 300 ರೂಪಾಯಿ
•SC/ST/ಪ್ರವರ್ಗ -1/ಅಂಗವಿಕಲರಿಗೆ. – 50 ರೂಪಾಯಿ
ಪಾವತಿಸುವ ವಿಧಾನಗಳು :
1.ನೆಟ್ ಬ್ಯಾಂಕಿಂಗ್
2.ಕ್ರೆಡಿಟ್ ಕಾರ್ಡ್
3. ಡೆಬಿಟ್ ಕಾರ್ಡ್
4. UPI
ಹೇಗೆ ಅರ್ಜಿ ಶುಲ್ಕ ಪಾವತಿ ಮಾಡುವುದು?
1.ನಿಮ್ಮ ಅರ್ಜಿಯನ್ನು ಪೂರ್ಣವಾಗಿ ಭರ್ತಿ ಮಾಡಿದ ನಂತರ ಸರಿಯಾಗಿ ಪರಿಶೀಲಿಸಿ.
2.ನಂತರ pay now ಬಟನ್ ಮೇಲೆ ಕ್ಲಿಕ್ ಮಾಡಿ.ನಂತರ ಹೊಸ ಪೇಜ್ ಓಪನ್ ಆಗುತ್ತದೆ.ಅಲ್ಲಿ ಮೇಲೆ ನೀಡಿದ ಪೇಮೆಂಟ್ ಆಪ್ಷನ್ ಗಳಲ್ಲಿ ಒಂದನ್ನು ಆಯ್ದುಕೊಳ್ಳಿ.
3. ಪೇಮೆಂಟ್ ಸ್ಟೇಟಸ್ ಯಶಸ್ವಿ ಆದರೆ KPSC udyoga software ಗೆ ಮತ್ತೆ ರೀಡೈರೆಕ್ಟ್ ಮಾಡಲಾಗುತ್ತದೆ.
4. ಅಲ್ಲಿ ನಿಮ್ಮ ಅಪ್ಲೈ ಮಾಡಿದ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
ಸೂಚನೆ : ಅರ್ಜಿ ಸಲ್ಲಿಸಿದ ನಂತರ ಶುಲ್ಕ ಪಾವತಿ ಮಾಡುವಾಗ ಮೇಲೆ ನೀಡಿದ ಅರ್ಜಿ ಶುಲ್ಕದಲ್ಲಿ ನಿಮಗೆ ಅನ್ವಯವಾಗುವ ಅರ್ಜಿ ಶುಲ್ಕವನ್ನು ಪಾವತಿ ಮಾಡಿ.
ಗಮನಿಸಿ : ಅರ್ಜಿದಾರರು ಕಡ್ಡಾಯವಾಗಿ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು .ಇಲ್ಲವಾದರೆ ಅರ್ಜಿಯನ್ನು ತಿರಸ್ಕರಿಸಲಾಗುವುದು.ಪಾವತಿಸುವ ಮೊದಲು ಈ ಹುದ್ದೆಯ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿ.ಒಮ್ಮೆ ಪಾವತಿ ಮಾಡಿದ ನಂತರ ಶುಲ್ಕವನ್ನು ಹಿಂದಿರುಗಿಸಲು ಆಗುವುದಿಲ್ಲ.
ಲ್ಯಾಂಡ್ ಸರ್ವೇಯರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಒತ್ತಿ.
KPSC ಲ್ಯಾಂಡ್ ಸರ್ವೇಯರ್ ಹುದ್ದೆಗೆ ಅರ್ಜಿ ಹಾಕುವುದು ಹೇಗೆ ?
•ಅಭ್ಯರ್ಥಿಗಳು ಮೇಲೆ ನೀಡಿದ KPSC ಯ ಅಧಿಕೃತ ವೆಬ್ ಸೈಟ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.
•ಮೊದಲ ಬಾರಿ KPSC ಅಲ್ಲಿ ಅರ್ಜಿ ಹಾಕುವವರು ರೆಜಿಸ್ಟರ್ ಅಂತ ಒತ್ತಿ ನಿಮ್ಮ ಹೆಸರು & ಫೋನ್ ನಂಬರ್ ಹಾಕಿ ರೆಜಿಸ್ಟರ್ ಆಗಿ.
•ನಂತರ ರೆಜಿಸ್ಟರ್ ಆದ ವಿವರ ಹಾಕಿ ಲಾಗಿನ್ ಆಗಿ ಅರ್ಜಿಯನ್ನು ಮುಂದುವರಿಸಿ.
•ಅಭ್ಯರ್ಥಿಗಳು ಒಮ್ಮೆ ನೀಡುವ ವಿವರ ನಿಮ್ಮ ಎಲ್ಲಾ KPSC ಹುದ್ದೆಗಳಿಗೆ ಅನ್ವಯವಾಗುತ್ತದೆ.ಆದ್ದರಿಂದ ವಿವರಗಳನ್ನು ಸರಿಯಾಗಿ ನೀಡಿ.ನಿಮ್ಮ user ID ಮತ್ತು password ಅನ್ನು ನೆನಪಿಟ್ಟುಕೊಳ್ಳಿ.
•ನಂತರ ಅರ್ಜಿಯನ್ನು ಭರ್ತಿ ಮಾಡಿ.ಎಲ್ಲಾ ದಾಖಲೆಗಳನ್ನು ಇನ್ನೊಮ್ಮೆ ಖಚಿತ ಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಿ.ಅದರ ಅರ್ಜಿ ಶುಲ್ಕವನ್ನು ಮೇಲೆ ನೀಡಿದ ಹಾಗೆ ಪಾವತಿ ಮಾಡಿ.
•ಕೊನೆಗೆ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
ಸೂಚನೆ : ಒಮ್ಮೆ ಅರ್ಜಿ ಸಲ್ಲಿಸಿದ ನಂತರ ತಿದ್ದುಪಡಿ ಮಾಡಲು ಆಗುವುದಿಲ್ಲ ಆದ್ದರಿಂದ ಅರ್ಜಿ ತುಂಬುವಾಗ ಸರಿಯಾಗಿ ತುಂಬಿರಿ.
Important : ಕಂದಾಯ ಇಲಾಖೆಯ ಭೂಮಾಪಕರ 364 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.ಅದರಲ್ಲಿ ರಾಜ್ಯಾದ್ಯಂತ 264 ಹುದ್ದೆಗಳು ಮತ್ತು 100 ಭೂಮಾಪಕರ ಹುದ್ದೆಗಳು ಹೈದರಾಬಾದ್ ಕರ್ನಾಟಕ (HK) ವಿಭಾಗದವರಿಗೆ ಮೀಸಲಾಗಿವೆ.
ನಮ್ಮ ವೆಬ್ ಸೈಟ್ ನಲ್ಲಿ ಪ್ರತಿ ದಿನ ಇದೆ ತರಹದ ಪ್ರಚಲಿತ ಸುದ್ದಿ,ಉದ್ಯೋಗ ಮಾಹಿತಿ ,ರೈತರಿಗೆ ಸಂಬಂಧಪಟ್ಟ ಮಾಹಿತಿ ಮತ್ತು ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಈ ಮಾಹಿತಿ ನಿಮಗೆ ಇಷ್ಟ ಆದರೆ ನಮ್ಮ ಸೈಟ್ ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ.ನಿಮ್ಮ ಕುಟುಂಬ ಹಾಗೂ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.